ಕಳೆದ ಹಲವು ದಿನಗಳಿಂದ ಕೊಪ್ಪಕ್ಕೆ ಆಕ್ಸಿಜನ್ ಪ್ಲಾಂಟ್ ಮಂಜೂರು ಕುರಿತು ರಾಜಕೀಯ ವಲಯದಲ್ಲಿ ಟೀಕೆ ಟಿಪ್ಪಣಿಗಳು ವ್ಯಕ್ತವಾಗಿದ್ದವು.ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ತನ್ನ ಮನವಿಯ ಮೇರೆಗೆ ಕೊಪ್ಪಕ್ಕೆ ಆಕ್ಸಿಜನ್ ಪ್ಲಾಂಟ್ ಮಂಜೂರಾಗಿತ್ತು ಆದರೆ ಮಾಜಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ರಾಜಕೀಯ ಉದ್ದೇಶದಿಂದ ತಮ್ಮ ರಾಜಕೀಯ ಪ್ರಭಾವ ಬಳಸಿ ಅದನ್ನು ಕಾರ್ಕಳ ತಾಲೂಕಿಗೆ ಹೋಗುವಂತೆ ಮಾಡಿದ್ದಾರೆ ಎಂಬ ಗುರುತರವಾದ ಆರೋಪ ಮಾಡಿದ್ದರು.
ಇದೊಂದು ಹುರುಳಿಲ್ಲದ, ಟೀಕೆ ಮಾಡುವ ಉದ್ಧೇಶದಿಂದ ಮಾಡುತ್ತಿರುವ ಆರೋಪ ಎಂಬ ಪ್ರತ್ಯುತ್ತರವನ್ನೂ ಜೀವರಾಜ್ ನೀಡಿದ್ದರು.
ಇದೀಗ ಶೃಂಗೇರಿ, ನರಸಿಂಹರಾಜಪುರ ಹಾಗೂ ಕೊಪ್ಪ ತಾಲೂಕಿನ ಕೇಂದ್ರ ಬಿಂದುವಾಗಿರುವ ಕೊಪ್ಪದಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಸರಕಾರ ಅನುಮತಿ ನೀಡಿದೆ.
ಆದರೆ ಈ ನಡುವೆ ಇದರ ಕ್ರೆಡಿಟ್ ಪಡೆದುಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕೆಸರೆರೆಚಾಟ ಪ್ರಾರಂಭ ಆಗಿದೆ.
ಬಿಜೆಪಿ ನಾಯಕರು ತಮ್ಮ ನಾಯಕರಾದ ಜೀವರಾಜ್ ಅವರಿಂದಲೇ 500 ಎಂಎಲ್ ಡಿ ಆಕ್ಸಿಜನ್ ಪ್ಲಾಂಟ್ ಮಂಜೂರಾಗಿದ್ದು, ಅವರಿಗೆ ಧನ್ಯವಾದ ತಿಳಿಸುತ್ತೇವೆ ಹಾಗೆಯೇ ಈ ಹಿಂದೆ ಕಾಂಗ್ರೆಸ್ ಮುಖಂಡರು ಜೀವರಾಜ್ ಕೊಪ್ಪಕ್ಕೆ ಆಕ್ಸಿಜನ್ ಪ್ಲಾಂಟ್ ತಂದಲ್ಲಿ ಅವರ ಫೋಟೋ ಇಟ್ಟು ಗೌರವಿಸುತ್ತೇವೆ ಎಂದಿದ್ದರು ಈಗ ಹೇಳಿದಂತೆ ಫೋಟೋ ಇಟ್ಟು ಗೌರವಿಸಲಿ ಎಂದು ಬಿಜೆಪಿ ಮುಖಂಡ ದಿನೇಶ್ ಹೊಸೂರು ಕುಟುಕಿದರೆ.
ಇನ್ನೊಂದೆಡೆ ಕಾಂಗ್ರೆಸ್ ಮುಖಂಡರು ಸಹ ತಮ್ಮ ಶಾಸಕರ ಪರ ಬ್ಯಾಟಿಂಗ್ ಬೀಸುತ್ತಿದ್ದು ಶಾಸಕರ ಮನವಿಯ ಮೇರೆಗೆ ಕೊಪ್ಪಕ್ಕೆ ಪ್ಲಾಂಟ್ ಬಂದಿದೆ.
ಜೀವರಾಜ್ ಸಹಿತ ಬಿಜೆಪಿ ನಾಯಕರು ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದು ನೂತನವಾಗಿ ಕೊಪ್ಪ ಪಟ್ಟಣ ಪಂಚಾಯಿತಿಗೆ ನೇಮಕವಾಗಿರುವ ಮುಖ್ಯಾಧಿಕಾರಿಗಳ ವರ್ಗಾವಣೆ ಆದೇಶವನ್ನು ಹಿಂಪಡೆಯುವಂತೆ ಸಚಿವರಿಗೆ ಪತ್ರ ಬರೆದು ಒತ್ತಡ ಹೇರುತ್ತಿದ್ದಾರೆ ಈ ಉದಾಹರಣೆಯಿಂದಲೇ ತಿಳಿಯುತ್ತದೆ ಈ ಹಿಂದೆ ಆಕ್ಸಿಜನ್ ಪ್ಲಾಂಟ್ ಅನ್ನು ಕೊಪ್ಪಕ್ಕೆ ಆಗದಂತೆ ತಡೆಹಿಡಿಯದವರು ಯಾರು ಎಂಬುದು ಎಂದು ಕಾಂಗ್ರೆಸ್ ನಾಯಕ ಸುಧೀರ್ ಕುಮಾರ್ ಮುರೊಳ್ಳೀ ಟೀಕಿಸಿದ್ದಾರೆ.


0 Comments